ನಿರ್ದೇಶಕ ಶ್ರೀನು 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರಕ್ಕೆ ಆಕ್ಷನ್ ಕಟ್
Posted date: 12 Mon, Feb 2024 11:47:46 PM
ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್ ಅಲ್ಲದೆ  ಇತ್ತೀಚೆಗೆ ತೆರೆಕಂಡ ಓ ಮೈ ಲವ್ ಚಿತ್ರಗಳ ನಂತರ ಸ್ಮೈಲ್ ಶ್ರೀನು ಅವರೀಗ ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಚಿತ್ರವೊಂದನ್ನು ನಿರ್ದೇಶಿಸಲು  ಸಜ್ಜಾಗಿದ್ದಾರೆ. ತಮ್ಮ ಪ್ರತೀ ಸಿನಿಮಾದಲ್ಲೂ ವಿಭಿನ್ನತೆ ಕಾಪಾಡಿಕೊಂಡು ಬರುತ್ತಿರುವ ನಿರ್ದೇಶಕ  ಶ್ರೀನು ಅವರು, ಈ ಚಿತ್ರದ ಮೂಲಕ   ಕನ್ನಡಕ್ಕೆ ಹೊಸಥರದ ಕಾನ್ಸೆಪ್ಟ್ ಹೊತ್ತು ತರುತ್ತಿದ್ದಾರೆ. 
 
ಈಗಾಗಲೇ ಹೊಸ ಚಿತ್ರದ  ಸ್ಕ್ರಿಪ್ಟ್ ವರ್ಕ್  ಶುರುವಾಗಿದ್ದು, ತಾರಾಗಣದ ಆಯ್ಕೆ ಪ್ರಕ್ರಿಯೆಗೆ  ಕೂಡ ಸಿದ್ದತೆ ನಡೆಯುತ್ತಿದೆ. ಕನ್ನಡ, ತೆಲುಗು ಸೇರಿ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ  ತಯಾರಾಗಲಿರುವ ಈ ಸಿನಿಮಾಕ್ಕೆ ಮೈರಾ ಎಂಬ ಶೀರ್ಷಿಕೆಯನ್ನು  ಫೈನಲ್ ಮಾಡಲಾಗಿದೆ.  ದಕ್ಷಿಣ ಭಾರತದ ಉಳಿದೆಲ್ಲ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಲಿದೆ. ಹೀಗಾಗಿ ಎಲ್ಲಾ ಭಾಷೆಗಳಿಗೂ  ಹೊಂದುವಂತೆ ಮೈರಾ ಎಂಬ ಟೈಟಲ್ ಇಟ್ಟಿದ್ದಾರೆ.
 
ನಿರ್ದೇಶಕ ಶ್ರೀನಿ ಅವರ. ಚಿತ್ರದಲ್ಲಿ ಈ ಸಲ  ಸ್ಟಾರ್ ನಟರು ಇರಲಿದ್ದಾರಾ... ಅಥವಾ ಹೊಸ ಪ್ರತಿಭೆಗಳಿಗೆ  ಅವಕಾಶ ನೀಡುತ್ತಾರಾ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು. ಯಾಕೆಂದರೆ, ಸದ್ಯ ಸ್ಕ್ರಿಪ್ಟ್ ಕೆಲಸದಲ್ಲಿ ಮಗ್ನರಾಗಿರುವ ಶ್ರೀನು, ಮೊದಲು ಕಥೆ, ಚಿತ್ರಕಥೆ ಮುಗಿಸಿ ಆನಂತರ ತಾರಾಗಣದ ಆಯ್ಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
     
ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್‌ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ ಕನ್ನಡದ ತಂತ್ರಜ್ಞರು, ನಿರ್ದೇಶಕರು ಪರಭಾಷೆಯಲ್ಲೂ ದೊಡ್ಡ ಛಾಪು ಮೂಡಿಸುತ್ತಿದ್ದಾರೆ. ನಾನು ಈಗಾಗಲೇ ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗದಲ್ಲಿ ತೊಡಗಿಕೊಂಡಿರುವುದರಿಂದ  ತೆಲುಗು ಇಂಡಸ್ಟ್ರಿಗೂ ಪರಿಚಿತನಾಗಿದ್ದೇನೆ. ಇದು ಕಂಪ್ಲೀಟ್ ಹೊಸ ರೀತಿಯ, ಈಗಿನ ಟ್ರೆಂಡ್‌ಗೆ ಹೊಂದುವಂಥ ಕಥೆ ಇರುವ ಚಿತ್ರ.  ಬಿಗ್ ಬಜೆಟ್ ನಲ್ಲಿ ತಯಾರಾಗಲಿರುವ ಈ ಚಿತ್ರವು ಬೃಹತ್ ತಾರಾಗಣದ ಜೊತೆಗೆ ತಾಂತ್ರಿಕ ವರ್ಗವೂ ಅದ್ಧೂರಿಯಾಗಿರಲಿದೆ. ಚಿತ್ರ ಸದ್ಯ ಸ್ಕ್ರಿಪ್ಟ್ ಹಂತದಲ್ಲಿದ್ದು ಹಂತ ಹಂತವಾಗಿ ಎಲ್ಲ‌  ಮಾಹಿತಿ  ತಿಳಿಸುವುದಾಗಿ  ನಿರ್ದೇಶಕ ಸ್ಮೈಲ್ ಶ್ರೀನು ಹೇಳಿದ್ದಾರೆ.

"ಇದನ್ನು ಹೊರತುಪಡಿಸಿ ಕನ್ನಡದಲ್ಲಿಯೇ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರುವುದಾಗಿ  ಶ್ರೀನು ಹೇಳಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed